ಸುದೀಪ್ ಮುಂದೆ ಭಾವುಕರಾದ ಸೌಂದರ್ಯ ಶೆಟ್ಟಿ; ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ಸೌಂದರ್ಯ ಶೆಟ್ಟಿಗೆ ‘ಕ್ಯಾರೆಕ್ಟರ್ಲೆಸ್’ ಎಂದ ಮಂಜನಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ!
ಹೌದು.. ಟಾಸ್ಕ್ ಒಂದರ ಸಮಯದಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಮಂಜ ನಡುವೆ ತೀವ್ರ ವಾಗ್ವಾದ ನಡೆದಿತ್ತು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಿಚಾರವನ್ನ ಪ್ರಸ್ತಾಪಿಸಿದ ಮಂಜ, “ನಾವು ಇಲ್ಲಿ ರೊಮ್ಯಾನ್ಸ್ ಮಾಡಲು ಅಥವಾ ಕೈ-ಕೈ ಹಿಡಿದುಕೊಂಡು ಓಡಾಡಲು ಬಂದಿಲ್ಲ. ಕ್ಯಾರೆಕ್ಟರ್ಲೆಸ್..” ಎಂದು ಸೌಂದರ್ಯ ಕುರಿತು ಅನುಚಿತವಾಗಿ ಮಾತನಾಡಿದ್ದರು.
ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿ, ಮಂಜನಿಗೆ ಬೆಂಡೆತ್ತಿದ್ದಾರೆ. “ನಿಮ್ಮ ಮಾತುಗಳು ಒಬ್ಬ ವ್ಯಕ್ತಿಯನ್ನ ಎಷ್ಟು ಕೊಲೆ ಮಾಡಬಹುದು ಗೊತ್ತಾ? ದೃಷ್ಟಿಕೋನ ಕಣ್ಣಿಗೆ ಕಾಣುವುದನ್ನ ಹೇಳುತ್ತದೆ, ಆದರೆ ಬುದ್ಧಿ ಬಳಸಿ ತಲೆ ಓಡಿಸುವುದು ನಿಮ್ಮ ಕೆಲಸ. ಮಾತಿನ ಮೇಲೆ ನಿಗಾ ಇರಲಿ..” ಎಂದು ಸುದೀಪ್ ತರಾಟೆಗೆ ತೆಗೆದುಕೊಂಡರು. ಈ ವೇಳೆ ಭಾವುಕರಾದ ಸೌಂದರ್ಯ ಶೆಟ್ಟಿ, “ಪ್ಲೀಸ್ ಸರ್.. ನನಗೆ ನಿಮ್ಮ ಸಹಾಯ ಬೇಕು” ಎಂದು ಕಿಚ್ಚನ ಮುಂದೆ ಕಣ್ಣೀರಿಟ್ಟಿದ್ದಾರೆ.
